Job Description: ನವದೆಹಲಿ: ಕೊರೋನ ವೈರಸ್ ಭೀತಿಯಿಂದ ದೇಶಾಂಧ್ಯಂತ ಲಾಕ್ ಡೌನ್ ಹೇರಲಾಗಿದ್ದು, ಈ ಹೋರಾಟದ ಬಳಿಕ ಭಾರತದ ಅರ್ಥ ವ್ಯವಸ್ಥೆಗೆ ದೊಡ್ಡ ಸವಾಲು ಎದುರಾಗಲಿದ್ದು, ಭಾರತದಲ್ಲಿ ಸುಮಾರು 13.6 ಕೋಟಿಯಷ್ಟು ಉದ್ಯೋಗಾವಕಾಶಗಳ ನಷ್ಟವಾಗಬಹುದೆಂದು ಕೈಗಾರಿಕಾ ಸಂಸ್ಥೆ ಸಿಐಐ ಹೇಳಿದೆ. ಬೇಡಿಕೆ ಮತ್ತು ಪೂರೈಕೆಯ ನಡುವಿನ ವ್ಯತ್ಯಾಸದಿಂದ ಉಂಟಾಗುವ ಕಡಿಮೆ ಬೆಳವಣಿಗೆಯು ಹೊಸ ಉದ್ಯೋಗ ಸೃಷ್ಟಿಯನ್ನು ಸೀಮಿತಗೊಳಿಸುವುದಲ್ಲದೆ, ಪ್ರಸ್ತುತ ಉದ್ಯೋಗದಲ್ಲಿರುವವರಿಗೂ ಕೂಡ ಸಮಸ್ಯೆ ಎದುರಾಗಲಿದೆ ಎಂದು ತಿಳಿದು ಬಂದಿದೆ.