Job Description: ಬ್ರುಸ್ಸೆಲ್ಸ್ : ಬೆಲ್ಜಿಯಂ ರಾಜಧಾನಿ ಬ್ರುಸ್ಸೆಲ್ಸ್ನಲ್ಲಿರುವ ಮನೆಯಲ್ಲಿ ಸಾಕಿರುವ ಸಾಕು ಬೆಕ್ಕಿನಲ್ಲಿ ಕರೊನಾ ಸೋಂಕಿತರ ರೋಗ ಲಕ್ಷಣಗಳು ಕಂಡುಬಂದಿವೆ ಎಂದು ವರದಿಯಾಗಿದೆ. ಈ ಬೆಕ್ಕಿಗೆ ಮನೆಯ ಮಾಲೀಕನ ಮೂಲಕ ಸೋಂಕು ತಗುಲಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಬೆಕ್ಕಿನ ಮಾಲೀಕನಿಗೆ ಒಂದು ವಾರದ ಮುಂಚೆಯೇ ಕರೊನಾ ಲಕ್ಷಣಗಳು ಕಂಡುಬಂದಿದ್ದು ಇದೀಗ ಅದು ಮನೆ ಸಾಕು ಬೆಕ್ಕಿಗೂ ವ್ಯಾಪಿಸಿದೆ ಎಂದು ನಂಬಲಾಗಿದೆ. ಈ ಬೆಕ್ಕಿಗೆ ಕರೋನ ರೋಗ ಲಕ್ಷಣಗಳು ಇರುವುದಾಗಿ ಬ್ರುಸ್ಸೆಲ್ಸ್ನ ಘೆಂಟ್ ವಿಶ್ವವಿದ್ಯಾಲಯದ ಪಶುವೈದ್ಯಕೀಯ ಔಷಧ ವಿಭಾಗದ ಡಾಕ್ಟರಲ್ ಸಂಶೋಧಕ ಪ್ರೊಫೆಸರ್ ಸ್ಟೀವನ್ ವ್ಯಾನ್ ಗುಚ್ಟ್ ತಿಳಿಸಿದ್ದಾರೆ.