Job Description: ಕೋವಿಡ್ 19 ವೈರಸ್ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 'ಕೊರೊನಾ ಕವಚ್' ಎಂಬ ಹೊಸ ಮೊಬೈಲ್ ಅಪ್ಲಿಕೇಷನ್ ಅನ್ನು ರೂಪಿಸಿದೆ. ಈ ಆಯಪ್ ಅನ್ನು ಶೀಘ್ರದಲ್ಲೇ ಕೇಂದ್ರವು ಬಿಡುಗಡೆಗೊಳಿಸಲಿದೆ. ಕೇಂದ್ರ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ಇಲಾಖೆ ವತಿಯಿಂದ ಸಿದ್ಧಪಡಿಸಿರುವ ಈ ಅಯಪ್ ಆಯಂಡ್ರಾಯ್ಡ್ ಹಾಗೂ ಐಫೋನ್ ಗಳಲ್ಲಿ ಲಭ್ಯವಾಗಲಿದೆ. ಆಯಪ್ ನ ಶೇಷತೆ: ಲೊಕೇಷನ್ ಸೇವೆಯನ್ನಾಧರಿಸಿ ಕೆಲಸ ಮಾಡುವ 'ಕೊರೊನಾ ಕವಚ್ ಆಯಪ್' ಮೊಬೈಲ್ ಬಳಕೆದಾರನ ಚಲನವಲನಗಳನ್ನು ಗಮನಿಸಿ, ಆ ವ್ಯಕ್ತಿಯು ಕರೋನ ಸೋಂಕಿತರನ್ನು ಭೇಟಿಯಾಗಿದ್ದಾರೆ ಈ ಕುರಿತು ಮಾಹಿತಿ ನೀಡುತ್ತದೆ. ಆರಂಭದಲ್ಲಿ ಈ ಆಯಪ್ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಲಭ್ಯವಿರಲಿದೆ.