Job Description: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಪುಸ್ತಕ ಟ್ರಸ್ಟ್ COVID-19 ನಿಂದಾಗಿ ವಿಧಿಸಿರುವ ಲಾಕ್-ಡೌನ್ ನಿಂದಾಗಿ ಮನೆಯಲ್ಲಿರುವ ಭಾರತೀಯರಿಗಾಗಿ “ಸ್ಟೇ ಹೋಮ್ ಇಂಡಿಯಾ ವಿತ್ ಬುಕ್ಸ್” ಅಭಿಯಾನವನ್ನು ಆರಂಭಿಸಿದೆ, ಇದರಿಂದಾಗಿ NBT (ರಾಷ್ಟ್ರೀಯ ಪುಸ್ತಕ ಟ್ರಸ್ಟ್) ನ ಅಧಿಕೃತ ಜಾಲತಾಣದಿಂದ ಸುಮಾರು 100 ಕ್ಕೂ ಹೆಚ್ಚು ಪುಸ್ತಕಗಳನ್ನು ಸಾರ್ವಜನಿಕರು ಡೌನ್‌ಲೋಡ್ ಮಾಡಿಕೊಂಡು ಓದಬಹುದಾಗಿದೆ. ಈ ಪುಸ್ತಕಗಳು ಭಾರತೀಯ ಭಾಷೆಗಳಾದ ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ತೆಲುಗು, ಕೊಕ್ಬೊರೊಕ್, ಬೋಡೋ, ಮಿಜೊ, ತಮಿಳು, ನೇಪಾಳಿ, ಕನ್ನಡ, ಉರುಡು, ಮಲಯಾಳಂ, ತೆಲುಗು ಇತ್ಯಾದಿಗಳಲ್ಲಿ ಲಭ್ಯವಿವೆ. ರಾಷ್ಟ್ರೀಯ ಪುಸ್ತಕ ಟ್ರಸ್ಟ್: ನ್ಯಾಷನಲ್ ಬುಕ್ ಟ್ರಸ್ಟ್ ಅನ್ನು 1957 ರಲ್ಲಿ ಸ್ಥಾಪಿಸಲಾಯಿತು. ಈ ಟ್ರಸ್ಟ್ ಪ್ರಕಾಶನ, ಭಾರತೀಯ ಪುಸ್ತಕಗಳ ಪ್ರಚಾರ, ಮಕ್ಕಳ ಸಾಹಿತ್ಯ ಸೇರಿ ವಿವಿಧ ಚಟುವಟಿಕೆಗಳಲ್ಲಿ ನಿರತವಾಗಿರುತ್ತದೆ.