Job Description: ದಿನಾಂಕ ಮಾರ್ಚ್ 26, 2020 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ ಅವರು ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ ಅನ್ನ ಯೋಜನೆಗೆ ಚಾಲನೆ ನೀಡಿದರು. ದೇಶದಲ್ಲಿ ವ್ಯಾಪಿಸುತ್ತಿರುವ COVID-19 ನಿಯಂತ್ರಿಸಲು ಮತ್ತು ಅದರ ಪರಿಣಾಮಗಳ ವಿರುದ್ಧ ಹೋರಾಡಲು ಆರ್ಥಿಕ ಸಹಾಯ ನೀಡುವ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಸುಮಾರು 1.7 ಲಕ್ಷ ಕೋಟಿ ರೂ ಬಿಡುಗಡೆಗೊಳಿಸಿದೆ. * ಈ ಯೋಜನೆಯಡಿ ಸುಮಾರು 80 ಕೋಟಿ ಜನರಿಗೆ ಮುಂದಿನ ಮೂರು ತಿಂಗಳವರೆಗೆ ಹೆಚ್ಚುವರಿ 5 ಕೆಜಿ ಉಚಿತ ಅಕ್ಕಿ ಮತ್ತು ಗೋಧಿ ಸಿಗಲಿದೆ. ಜೊತೆಗೆ ಪ್ರತಿ ಮನೆಗೆ 1 ಕೆಜಿ ಉಚಿತ ದ್ವಿದಳ ಧಾನ್ಯಗಳನ್ನು ನೀಡಲಾಗುವದು. * ಈ ಯೋಜನೆಯಡಿ ವೈರಸ್ ವಿರುದ್ಧದ ಹೋರಾಟದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ನೈರ್ಮಲ್ಯ ಕಾರ್ಮಿಕರು, ದಾದಿಯರು, ಅರೆವೈದ್ಯರು ಮತ್ತು ಇತರ ಸಿಬ್ಬಂದಿಗೆ ವಿಮಾ ಯೋಜನಾ ರಕ್ಷಣೆ ನೀಡುತ್ತದೆ. * ಸುಮಾರು 3 ಕೋಟಿ ಜನ ವೃದ್ಧಾಪ್ಯ, ವಿಕಲಚೇತನ ಮತ್ತು ಪಿಂಚಣಿದಾರರಿಗೆ ನೇರ 1000 ರೂಪಾಯಿ ಹಣ ವರ್ಗಾವಣೆ ಮಾಡಲಾಗುವದು. ಇದರಿಂದ 3 ಕೋಟಿ ಜನರಿಗೆ ಅನುಕೂಲವಾಗಲಿದೆ.