Job Description: ಇತ್ತೀಚಿಗಷ್ಟೇ ಗ್ರೀಸ್ ನಿಂದ ಒಲಿಂಪಿಕ್ ಜ್ವಾಲೆಯನ್ನು ಜಪಾನ್‌ಗೆ ಹಸ್ತಾಂತರಿಸಲಾಗಿತ್ತಾದರೂ, ಕರೋನಾ ವೈರಸ್ ಪ್ರಕರಣಗಳು ಜಗತ್ತಿನಾಧ್ಯಂತ ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು 2020 ರ ಒಲಿಂಪಿಕ್ಸ್ ಅನ್ನು ಮುಂದೂಡಲು ಯೋಚಿಸುತ್ತಿದ್ದು, ಸಂಸ್ಥೆ ಒಲಿಂಪಿಕ್ಸ್ ಅನ್ನು 2021 ಕ್ಕೆ ಮುಂದೂಡಬಹುದಾದ ಸಾಧ್ಯತೆಗಳಿವೆ. ಒಲಿಂಪಿಕ್ಸ್ ಮುಂದೂಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ 4 ವಾರಗಳ ಕಾಲಮಿತಿಯನ್ನು ನಿಗದಿಪಡಿಸಿದ್ದು ಈ ಕಾಲಮಿತಿಯೊಳಗೆ ತನ್ನ ಅಂತಿಮ ತೀರ್ಮಾನ ತಿಳಿಸಲಿದೆ. COVID-19 ವೈರಸ್ ಭೀತಿಯಿಂದ ಕ್ರೀಡಾಪಟುಗಳ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಪರಿಗಣಿಸಿ ಕೆನಡಾ, ಉತ್ತರ ಕೊರಿಯಾ ಮತ್ತು ಇಂಡೋನೇಷ್ಯಾ ರಾಷ್ಟ್ರಗಳು ಈಗಾಗಲೇ ಆಟದಿಂದ ಹಿಂದೆ ಸರಿಯುವುದಾಗಿ ಘೋಷಿಸಿವೆ.