Job Description: ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಕರೋನ ವೈರಸ್ ವಿರುದ್ಧ ಹೋರಾಡಲು ಭಾನುವಾರ 'ಜನತಾ ಕರ್ಫ್ಯೂ' ಆಚರಿಸುವಂತೆ ದಿನಾಂಕ 19 ಮಾರ್ಚ್ 2020 ರಂದು ಭಾರತಿಯಲ್ಲಿ ಮನವಿ ಮಾಡಿದ್ದಾರೆ, ಮೋದಿಯವರ ಈ ಯೋಜನೆಯನ್ನು ವಿಶ್ವ ಸಂಸ್ಥೆ ಪ್ರಶಂಸಿದೆ, ಹಾಗೂ ಕರೋನ ವೈರಸ್ ಹರಡದಂತೆ ತಡೆಗಟ್ಟಲು ಇದೊಂದು ಒಳ್ಳೆಯ ಯೋಜನೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಲ್ಲದೆ ಭಾರತದ ಪ್ರಧಾನಿ ಮೋದಿ ಜನತಾ ಕರ್ಫ್ಯೂ ಜಾರಿಗೊಳಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಏನಿದು ಜನತಾ ಕರ್ಫ್ಯೂ ? ಮೋದಿ ಗುರುವಾರ ದೇಶವನ್ನು ಉದ್ಧೇಶಿಸಿದ ಮಾತನಾಡಿದ್ದು 'ಜನತಾ ಕರ್ಫ್ಯೂ' ಕರೆ ನೀಡಿದ್ದಾರೆ. ಇದು ಸರ್ಕಾರ ಜಾರಿಮಾಡಿರುವ ಕರ್ಪ್ಯೂ ಆಗಿರದೆ ಜನರು ತಮ್ಮಷ್ಟಕ್ಕೆ ತಾವೇ ವಿಧಿಸಿಕೊಳ್ಳುವ ಕರ್ಪ್ಯೂ ಆಗಿರುತ್ತದೆ, ಈ ದಿನ ಭಾರತೀಯರು ಬೆಳಿಗ್ಗೆ 07 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಇದನ್ನು ಸ್ವಯಂ ಆಚರಿಸಲು ಸೂಚಿಸಲಾಗಿದೆ.