Job Description: ವಾಶಿಂಗ್ಟನ್ : ಇಡೀ ಜಗತ್ತನ್ನೇ ನಿದ್ದೆಗೆಡಿಸಿರುವ ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ, ಈ ವರ್ಷ ವಾಶಿಂಗ್ಟನ್ ಸಮೀಪದ ಕ್ಯಾಂಪ್ ಡೇವಿಡ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದ್ದ 2020 ರ ಜಿ7 ಶೃಂಗಸಭೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರದ್ದುಪಡಿಸಿ ಅದರ ಬದಲಿಗೆ ಜಿ7 ನಾಯಕರು ಮತ್ತು ಅಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಶೃಂಗಸಭೆ ನಡೆಸಲು ಉದ್ದೇಶಿಸಲಾಗಿದೆ ಎಂದು ಶ್ವೇತಭವನ ಪ್ರಕಟಿಸಿದೆ. ಜಿ7 ರಾಷ್ಟ್ರಗಳು: ಜಗತ್ತಿನ ಏಳು ಶ್ರೀಮಂತ ಪ್ರಜಾಪ್ರಭುತ್ವ ಹೊಂದಿರುವ ದೇಶಗಳ ಗುಂಪು