Job Description: ಅಥೆನ್ಸ್ : ಕೊರೊನಾ ವೈರಸ್ ಭೀತಿಯಿಂದಾಗಿ ಈಗಾಗಲೇ ಅದೆಷ್ಟೋ ಕ್ರೀಡಾಕೂಟಗಳನ್ನು ರದ್ದುಪಡಿಸಲಾಗಿದೆ ಮತ್ತು ಕೆಲವನ್ನು ಮುಂದೂಡಲಾಗಿದೆ. ಇದೆಲ್ಲದರ ನಡುವೆ ಜಪಾನ್ ನಿಗದಿತ ಸಮಯಕ್ಕೆ ಒಲಿಂಪಿಕ್ಸ್ ಕ್ರೀಡಾಕೂಟವನ್ನು ನಡೆಸುವದಾಗಿ ಹೇಳುತ್ತಲೆ ಬಂದಿದೆ. ಅಲ್ಲದೆ ಗ್ರೀಸ್ ನಲ್ಲಿ ಗುರುವಾರ ಟೋಕಿಯೊ ಒಲಿಂಪಿಕ್ಸ್ ಸಮಿತಿಗೆ ಟಾರ್ಚ್(ಕ್ರೀಡಾ ಜ್ಯೋತಿ) ನೀಡಲಾಗಿದೆ. ಈ ಕ್ರೀಡಾ ಜ್ಯೋತಿಯನ್ನು ಒಲಿಂಪಿಕ್ ಧ್ರುವ ವಾಲ್ಟ್ ಚಾಂಪಿಯನ್ ಕತ್ರಿನಾ ಸ್ಟೆಫಾನಿಡಿ ಅವರು ಪಂಥನಾಸಿಕ್ ಕ್ರೀಡಾಂಗಣದೊಳಗೆ ಬೆಳಗಿಸಿದರು.