Job Description: ನವದೆಹಲಿ : ಭಾರತೀಯ ನೌಕಾ ಪಡೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗ ಸ್ಥಾಪಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಈ ತೀರ್ಪು ನೀಡಿದ್ದು ಕೇಂದ್ರ ಸರ್ಕಾರಕ್ಕೆ ಇನ್ನು ಮೂರು ತಿಂಗಳೊಳಗೆ ಆಯೋಗ ರಚಿಸುವ ಸಂಬಂಧ ರೂಪು ರೇಷೆಗಳನ್ನು ಸಿದ್ಧಪಡಿಸಲು ನಿರ್ದೇಶನ ನೀಡಿದೆ. * ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ಭಾರತೀಯ ಭೂ ಸೇನೆ ಮಹಿಳಾ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಪ್ರತ್ಯೇಕ ಶಾಶ್ವತ ಆಯೋಗ ರಚಿಸಲು ಆದೇಶ ನೀಡಿತ್ತು. * ಪುರುಷರು ಮತ್ತು ಮಹಿಳಾ ಸಿಬ್ಬಂದಿ ನಡುವೆ ಯಾವುದೇ ಲಿಂಗ ತಾರತಮ್ಯ ಇರಬಾರದು ಎಂದು ಮಹಿಳೆಯರಿಗೆ ಪ್ರತ್ಯೇಕ ಶಾಶ್ವತ ಆಯೋಗ ರಚಿಸುವಂತೆ ತೀರ್ಪು ನೀಡಿದೆ.