Job Description: ನವದೆಹಲಿ : ಕೊರೋನ ವೈರಸ್ ಸೋಂಕು ಭಾರತದಲ್ಲಿ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಭಾರತ ಸರ್ಕಾರವು ವಿವಿಧ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ. ಯುರೋಪಿಯನ್ ಯೂನಿಯನ್ (ಇಯು) ದೇಶಗಳು, ಯುರೋಪಿಯನ್ ಮುಕ್ತ ವ್ಯಾಪಾರ ಸಂಘ, ಟರ್ಕಿ ಮತ್ತು ಯುನೈಟೆಡ್ ಕಿಂಗ್ ಡಮ್, ಅಫ್ಘಾನಿಸ್ಥಾನ, ಫಿಲಿಪೈನ್ಸ್ ಮತ್ತು ಮಲೇಷ್ಯಾ ನಿಂದ ಬರುವ ಪ್ರಯಾಣಿಕರಿಗೆ ಭಾರತ ಪ್ರವೇಶಿಸುವುದಕ್ಕೆ ಕೇಂದ್ರ ಸರಕಾರ ಸೋಮವಾರ ನಿಷೇಧ ವಿಧಿಸಿದೆ. "ಮಾರ್ಚ್ 18, 2020 ರಿಂದ ಯಾವುದೇ ವಿಮಾನಯಾನ ಸಂಸ್ಥೆಗಳು ಈ ರಾಷ್ಟ್ರಗಳಿಂದ ಪ್ರಯಾಣಿಕರನ್ನು ಭಾರತಕ್ಕೆ ಕರೆ ತರಬಾರದು" ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.