Job Description: ನವದೆಹಲಿ: ದಿನಾಂಕ ಮಾರ್ಚ್ 08 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿಶ್ವವಿಖ್ಯಾತ ಆಗ್ರಾದ ತಾಜ್ಮಹಲ್ ಸೇರಿ ದೇಶದ ಎಲ್ಲ ಸಂರಕ್ಷಿತ ಸ್ಮಾರಕಗಳಿಗೆ ಮಹಿಳೆಯರಿಗೆ ಉಚಿತ ಪ್ರವೇಶ ನೀಡಲಾಗುವುದೆಂದು ಎಂದು ಭಾರತ ಪುರಾತತ್ವ ಸಮೀಕ್ಷಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ದೇಶದಲ್ಲಿರುವ ಸ್ಮಾರಕಗಳಾದ ಕೆಂಪು ಕೋಟೆ, ಕುತುಬ್ ಮಿನಾರ್, ಹುಮಾಯೂನ್ ಸಮಾಧಿ, ತಾಜ್ ಮಹಲ್, ಕೊನಾರ್ಕ್ನ ಸೂರ್ಯ ದೇವಾಲಯ, ಮಾಮಲ್ಲಾಪುರಂ, ಎಲ್ಲೋರಾ ಗುಹೆಗಳು, ಖಜುರಾಹೊ ಸ್ಮಾರಕಗಳು ಮತ್ತು ಅಜಂತಾ ಗುಹೆಗಳು ಸೇರಿ ಎಲ್ಲ ಸಂರಕ್ಷಿತಾ ಸ್ಮಾರಕಗಳನ್ನು ವೀಕ್ಷಿಸಲು ಮಹಿಳೆಯರಿಗೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.