Job Description: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕನ್ನಡಿಗ ಸುಧಾಕರ ಚತುರ್ವೇದಿ ವಯೋಸಹಜದಿಂದ ನಿಧನರಾಗಿದ್ದರೆ. ಮಹಾತ್ಮಾ ಗಾಂಧೀಜಿಯವರ ಆಪ್ತರಾಗಿದ್ದ ಇವರು ನಾಲ್ಕು ವೇದಗಳ ಕುರಿತ ಅಧ್ಯಯನ ಮಾಡಿರುವ ಪಂಡಿತರಾಗಿದ್ದರು. ಮಹಾತ್ಮ ಗಾಂಧಿ ಅವರ 'ಪೋಸ್ಟ್ ಮನ್' ಎಂದೇ ಹೆಸರಾಗಿದ್ದವರು ಸುಧಾಕರ ಚತುರ್ವೇದಿ. ಅವರ ಬದುಕನ್ನು ಹೋರಾಟ ಮತ್ತು ಅಲೆದಾಟಗಳ ಜೋಡಣೆ ಎನ್ನಬಹುದು. ಶ್ರೀಯುತರು ದಿನಾಂಕ 27 ಫೆಬ್ರುವರಿ 2020 ರಂದು ಬೆಂಗಳೂರಿನಲ್ಲಿ ನಿಧನರಾದರು