Job Description: ಚೀನೀ ಅಕಾಡೆಮಿ ಆಫ್ ಸೈನ್ಸ ಕೆಂಪು ಪಾಂಡಾ ಪ್ರಭೇದಗಳಲ್ಲಿ ವಾಸ್ತವವಾಗಿ ಎರಡು ಪ್ರತ್ಯೇಕ ಜಾತಿಗಳಿರುವುದನ್ನು ಪತ್ತೆ ಹಚ್ಚಿದೆ. ಇಲ್ಲಿಯವರೆಗೂ ಹಿಮಾಲಯನ್ ಕೆಂಪು ಪಾಂಡಾ ಮತ್ತು ಚೀನೀ ಕೆಂಪು ಪಾಂಡಾಗಳನ್ನು ಒಟ್ಟಿಗೆ ಕೆಂಪು ಪಾಂಡಾ ಜಾತಿ ಎಂದು ಪರಿಗಣಿಸಲಾಗಿತ್ತಾದರೂ, ಡಿಎನ್‌ಎ ವಿಶ್ಲೇಷಣೆಯಿಂದ ಈ ಎರಡು ಪ್ರತ್ಯೇಕ ಜಾತಿಗಳಾಗಿವೆ ಎಂದು ತಿಳಿದು ಬಂದಿದೆ * ಚೀನಾದ ಕೆಂಪು ಪಾಂಡಾ ಉತ್ತರ ಮ್ಯಾನ್ಮಾರ್, ಸಿಚುವಾನ್, ಆಗ್ನೇಯ ಟಿಬೆಟ್ ಮತ್ತು ಚೀನಾದ ಯುನ್ನಾನ್ ಪ್ರಾಂತ್ಯಗಳಲ್ಲಿ ಕಂಡುಬರುತ್ತದೆ. * ಹಿಮಾಲಯನ್ ಕೆಂಪು ಪಾಂಡಾಗಳು ಭಾರತ, ನೇಪಾಳ, ಭೂತಾನ್ ಮತ್ತು ದಕ್ಷಿಣ ಟಿಬೆಟ್‌ನಲ್ಲಿ ಕಂಡುಬರುತ್ತವೆ.