Job Description: ಮುಂಬಯಿ : ಮಹಾರಾಷ್ಟ್ರದ ಪ್ರತಿ ಶಾಲೆಯಲ್ಲೂ ಮರಾಠಿ ಭಾಷೆ ವಿಷಯ ಕಲಿಕೆಯನ್ನು ಕಡ್ಡಾಯಗೊಳಿಸಿ ರಾಜ್ಯ ವಿಧಾನಸಭೆಯಲ್ಲಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ರಾಜ್ಯದಲ್ಲಿ ಎಲ್ಲ ಶಾಲೆಗಳಲ್ಲೂ ಮರಾಠಿ ಕಲಿಕೆ ಕಡ್ಡಾಯವಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಇದನ್ನು ಜಾರಿಗೊಳಿಸಲಾಗುವುದು ಈ ನಿಯಮ ಮೀರುವ ಶಾಲೆಗಳಿಗೆ ದಂಡವನ್ನು ವಿಧಿಸಲಾಗುವದು ಎಂದು ಮರಾಠಿ ಭಾಷೆ ಸಚಿವ ಸುಭಾಶ್ ದೇಸಾಯಿ ತಿಳಿಸಿದ್ದಾರೆ.