Job Description: ಫೆಬ್ರುವರಿ 28 ರಂದು ದೇಶಾದ್ಯಂತ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ದಿನದಂದು ದೇಶದಲ್ಲಿ ವಿಜ್ಞಾನ ದಿನವನ್ನು ಪ್ರಪಂಚ ಕಂಡ ಭಾರತದ ಶ್ರೇಷ್ಠ ಭೌತಶಾಸ್ತ್ರ ವಿಜ್ಞಾನಿ ಸಿ.ವಿ.ರಾಮನ್ ಅವರ ನೆನಪಿಗಾಗಿ ಆಚರಣೆ ಮಾಡಲಾಗುತ್ತಿದ್ದು, ಇವರು 1928 ರ ಫೆಬ್ರುವರಿ 28 ರಂದು ರಾಮನ್ ಪರಿಣಾಮವನ್ನು ಕಂಡುಹಿಡಿದಿದ್ದರು. ಈ ಗಳಿಗೆಯ ಸವಿನೆನಪಿಗಾಗಿ ಫೆಬ್ರವರಿ 28ರ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ವರ್ಷ ಅಂದರೆ 2020ರ ಆಚರಣೆಯಲ್ಲಿ "ವಿಜ್ಞಾನದಲ್ಲಿ ಮಹಿಳೆ" ಎನ್ನುವ ಥೀಮ್ ಅನ್ನು ಒಳಗೊಂಡಿದೆ.