Job Description: ಭೂಮಿಯು ಇದುವರೆಗೆ ಒಂದು ಉಪಗ್ರಹ ಹೊಂದಿದ್ದು ಅದುವೇ ಚಂದ್ರ. ಆದರೆ ಅಮೆರಿಕಾದ ವಿಜ್ಞಾನಿಗಳು ಭೂಮಿಗಿರುವ ಮತ್ತೊಂದು ಚಂದ್ರನನ್ನು ಪತ್ತೆಹಚ್ಚಿದ್ದಾರೆ. * ಭೂಮಿಯ ಸುತ್ತ ಸುತ್ತುತ್ತಿರುವ ಮತ್ತೊಂದು ಚಂದ್ರ ಸುತ್ತುತ್ತಿದ್ದಾನೆ ಎನ್ನುವ ಅಚ್ಚರಿಯ ವಿಚಾರವನ್ನು ಅಮೆರಿಕದ ಖಗೋಳಶಾಸ್ತ್ರಜ್ಞರು ಕಂಡು ಹಿಡಿದಿದ್ದಾರೆ. * ಸುಮಾರು 3 ವರ್ಷಗಳಿಂದ ಈ ಉಪಗ್ರಹ ಭೂಮಿ ಸುತ್ತ ಸುತ್ತುತಿದೆ. ಈ ಉಪಗ್ರಕಕ್ಕೆ 2020 CDs ಎಂದು ಹೆಸರಿಡಲಾಗಿದೆ. * ಈ ಹೊಸ ಚಂದ್ರನ ಗಾತ್ರ ತೀರಾ ಚಿಕ್ಕದಿದೆ. ಗರಿಷ್ಠ 6 ಮೀಟರ್ ವ್ಯಾಸ ಸುತ್ತಳತೆಯನ್ನು ಹೊಂದಿದೆ, ಮತ್ತು ಇದೊಂದು ಕ್ಷುದ್ರ ಗ್ರಹವಾಗಿದೆ ಎಂದು ತಿಳಿದು ಬಂದಿದೆ. * ಏಪ್ರಿಲ್ 2020ರ ವೇಳೆಗೆ ಈ ಚಂದ್ರ ಭೂಮಿಯ ಕಕ್ಷೆ ತೊರೆಯಲಿದೆ ಎಂದು ಖಗೋಳಶಾಸ್ತ್ರಜ್ಞರು ಅಂದಾಜಿಸಿದ್ದಾರೆ.