Job Description: ಮುಂಬೈನಲ್ಲಿ ವೈಆರ್'ಎಫ್ (YRF) ಸ್ಟುಡಿಯೋದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಬೆಡಗಿಯಾದ ಅಡ್ಲೀನ್ ಕ್ಯಾಸ್ಟಲಿನೋ ಅವರಿಗೆ ಈ ವರ್ಷದ 'ಲಿವಾ ಮಿಸ್ ದಿವಾ ಯುನಿವರ್ಸ್ 2020' ಕಿರೀಟವು ಮಂಗಳೂರಿನ ಬೆಡಗಿ ಎಡ್ಲಿನ್ ಕ್ಯಾಸ್ಟೆಲೀನೋ ಅವರ ಮುಡಿಗೇರಿದೆ. ಕ್ಯಾಸ್ಟೆಲೀನೋ ಅವರು ವರ್ಷಾಂತ್ಯದಲ್ಲಿ ನಡೆಯಲಿರುವ 'ಮಿಸ್ ಯುನಿವರ್ಸ್' ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಎರಡನೇ ಸ್ಥಾನ ಗಳಿಸಿದ ಜಬಲ್ಪುರದ ಆವೃತಿ ಚೌಧರಿ ಅವರು 'ಮಿಸ್ ದಿವಾ ಸುಪ್ರನ್ಯಾಷನಲ್' ಹಾಗೂ ಪುಣೆಯ ನೇಹಾ ಜೈಸ್ವಾಲ್ ಅವರು 'ಮಿಸ್ ದಿವಾ ರನ್ನರ್-ಅಪ್' ಕಿರೀಟಕ್ಕೆ ಭಾಜನರಾಗಿದ್ದಾರೆ.