Job Description: ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಸ್ಪರ್ಧಾಳುಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಾಲ್ಕನೇ ದಿನವೂ ಕೂಡ ಪದಕದ ಬೇಟೆ ಮುಂದುವರೆದಿದೆ. ಸ್ಪರ್ಧೆಯಲ್ಲಿ ಭಾರತ 5 ಚಿನ್ನ, 6 ಬೆಳ್ಳಿ ಮತ್ತು 9 ಕಂಚು ಸೇರಿದಂತೆ ಒಟ್ಟು 20 ಪದಕಗಳನ್ನು ಗೆದ್ದಿದೆ. ಗ್ರೀಕೋ-ರೋಮನ್ ಶೈಲಿಯಲ್ಲಿ 1 ಚಿನ್ನ ಮತ್ತು 4 ಕಂಚು ಸೇರಿದಂತೆ ಒಟ್ಟು 5 ಪದಕ ಗೆದ್ದು ಕೊಂಡಿದೆ. * 74 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಜಾಕ್‌ಸ್ಥಾನದ ದನಿಯರ್ ಕೈಸನೋವ್ ವಿರುದ್ಧ ಆಡಿ 1-3 ಅಂತರದಿಂದ ಸೋತು ಜಿತೇಂದ್ರ ಅವರು ಬೆಳ್ಳಿ ಪದಕ ಪಡೆದರು. * ರಾಹುಲ್ ಅವೇರ್ ಅವರು 61 ಕೆಜಿ ಮತ್ತು ದೀಪಕ್ ಪುನಿಯಾ ಅವರು 86 ಕೆಜಿ ವಿಭಾಗದಲ್ಲಿ ಕಂಚನ್ನು ಗೆದ್ದಿದ್ದಾರೆ.