Job Description: ನೈಋತ್ಯ ರೈಲ್ವೆ ವಲಯದ ಐದು ರೈಲ್ವೆ ನಿಲ್ದಾಣಗಳಿಗೆ ISO 14001-2015 ಪ್ರಮಾಣ ಪತ್ರ ಲಭಿಸುವುದರೊಂದಿಗೆ ಒಟ್ಟು ಹುಬ್ಬಳ್ಳಿ ವಿಭಾಗದ 9 ರೈಲು ನಿಲ್ದಾಣಗಳು ಸ್ವಚ್ಛತೆಯಲ್ಲಿ ISO ಪ್ರಮಾಣ ಪತ್ರ ಪಡೆದಂತಾಯಿತು. ಹುಬ್ಬಳ್ಳಿ ವಿಭಾಗದ ಐದು ರೈಲ್ವೆ ನಿಲ್ದಾಣಗಳಾದ ಹೊಸಪೆಟೆ, ಬಳ್ಳಾರಿ, ವಿಜಯಪುರ, ಲೋಂಡಾ ಮತ್ತು ಗದಗ ನಿಲ್ದಾಣಗಳು ಹೊಸದಾಗಿ ಐಎಸ್‌ಒ 14001-2015 (ಪರಿಸರ ನಿರ್ವಹಣಾ ವ್ಯವಸ್ಥೆ) ಪ್ರಮಾಣೀಕರಣ ಪಡೆದ ನಿಲ್ದಾಣಗಳಾಗಿವೆ. ಹುಬ್ಬಳ್ಳಿ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ್ ಮಲ್ಖೆಡೆ ಅವರು ಸೋಮವಾರ ಪ್ರಮಾಣ ಪತ್ರಗಳನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಪ್ರತಿನಿಧಿಗಳಿಂದ ಪಡೆದರು.