Job Description: ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಹಿರಿಯ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ದಿವ್ಯಾ ಕಕ್ರನ್ ಅವರು 68 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಒಟ್ಟು 5 ಜನ ಸ್ಪರ್ಧಿಗಳು 68 ಕೆಜಿ ವಿಭಾಗದಲ್ಲಿ ಅಖಾಡದಲ್ಲಿದ್ದರು. ಭಾರತದ ದಿವ್ಯಾ ಅವರು ನಾಲ್ಕು ಪಂದ್ಯಗಳನ್ನು ಗೆದ್ದು ಫೈನಲ್ ಪoಧ್ಯದಲ್ಲಿ ಜಪಾನಿನ ಆಟಗಾರ್ತಿ ನರುಹಾ ಮಾಟ್ಸುಯುಕಿಯನ್ನು 6-4 ಅಂತರದಲ್ಲಿ ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಹಿರಿಯ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಇದುವರೆಗೆ 2 ಚಿನ್ನ ಸೇರಿದಂತೆ ಒಟ್ಟು 06 ಪದಕ ಪಡೆದಿದೆ.