Job Description: ಕಂಪ್ಯೂಟರ್ ನಲ್ಲಿ ಎಲ್ಲರು ಸಾಮಾನ್ಯವಾಗಿ ಬಳಸುವ CUT, COPY, PASTE ತಂತ್ರಾಂಶವನ್ನು ಅವಿಸ್ಕರಿಸಿದ್ದ ಲ್ಯಾರಿ ಟೆಸ್ಲರ್ ಅವರು ನಿಧನರಾಗಿದ್ದಾರೆ. ನ್ಯೂಯಾರ್ಕ್ ನಲ್ಲಿ 1945 ರಂದು ಲ್ಯಾರಿ ಟೆಸ್ಲರ್ ಅವರು ಜನಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಲ್ಯಾರಿ ಟೆಸ್ಲರ್ ವಯೋಸಹಜ ಸಾವನ್ನಪ್ಪಿದ್ದಾರೆ. ಸ್ಟಾನ್ ಫೋರ್ಡ್ ವಿವಿಯಲ್ಲಿ ಕಂಪ್ಯೂಟರ್ ವಿಜ್ಞಾನ ವ್ಯಾಸಂಗ ಮಾಡಿದ್ದ ಇವರು 1973 ರಲ್ಲಿ ಕ್ಸೆರಾಕ್ಸ್ ಪಾಲೋ ಆಲ್ಟೋ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುವಾಗ 'cut, copy, paste' ತಂತ್ರಾಂಶವನ್ನು ಮೊದಲಿಗೆ ಕಂಡುಹಿಡಿದಿದ್ದರು. 1976 ರಲ್ಲಿ ಬ್ರೌಸರ್(Browser) ಶಬ್ದವನ್ನು ಕೂಡಾ ಲ್ಯಾರಿ ಟೆಸ್ಲರ್ ಅವರೇ ಕಂಡುಹಿಡಿದಿದ್ದು.