Job Description: ಅಟಲ್ ಭೂಜಲ ಯೋಜನೆಗಾಗಿ ಭಾರತ ಸರ್ಕಾರವು ವರ್ಲ್ಡ್ ಬ್ಯಾಂಕ್ ನೊಂದಿಗೆ ಸುಮಾರು 450 ಮಿಲಿಯನ್ ಅಮೆರಿಕನ್ ಡಾಲರು ಮೊತ್ತದ ಸಾಲ ಒಪ್ಪಂದಕ್ಕೆ ಸಹಿ ಹಾಕಿತು. ಅಂತರ್ಜಲವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ವರ್ಲ್ಡ್ ಬ್ಯಾಂಕ್ ನ “ರಾಷ್ಟ್ರೀಯ ಅಂತರ್ಜಲ ನಿರ್ವಹಣೆ ಸುಧಾರಣಾ ಕಾರ್ಯಕ್ರಮ” ಉತ್ತೇಜಿಸಲು ಮತ್ತು ಅಂತರ್ಜಲ ತಡೆಗಟ್ಟುವ ಸಲುವಾಗಿ ಈ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ತಿಳಿಸಲಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಹರಿಯಾಣ ರಾಜ್ಯಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ.