Job Description: ನವದೆಹಲಿ: ಭಾರತ ಸೇನೆಯಲ್ಲಿ ಲಿಂಗ ತಾರತಮ್ಯವನ್ನು ಹೊಡೆದೋಡಿಸುವ ಸಲುವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಇನ್ನು ಮುಂದೆ ಮಹಿಳಾ ಸೇನಾ ಅಧಿಕಾರಿಗಳಿಗೆ ಪುರುಷ ಸಮಾನ ಕಮಾಂಡ ಹುದ್ದೆಗಳನ್ನು ನೀಡಲು ತಿಳಿಸಿದೆ, ಜೊತೆಗೆ ಭಾರತೀಯ ಸೇನೆಯಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗವನ್ನು ಸ್ಥಾಪಿಸುವುದಕ್ಕೂ ಅಧಿಕಾರ ನೀಡಿದೆ. ನ್ಯಾಯಮೂರ್ತಿಗಳಾದ ಡಿ. ವೈ. ಚಂದ್ರಚೂಡ್ ಮತ್ತು ಅಜಯ್ ರಸ್ತೊಗಿ ಅವರನ್ನೊಳಗೊಂಡ ನ್ಯಾಯಪೀಠವು ಈ ತೀರ್ಪು ಪ್ರಕಟಿಸಿ, ಆದೇಶವನ್ನು ಜಾರಿಗೆ ತರಲು ಕೇದ್ರ ಸರ್ಕಾರಕ್ಕೆ 03 ತಿಂಗಳ ಕಾಲಾವಕಾಶ ನೀಡಿತು.