Job Description: ದೆಹಲಿಯಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿದ್ದು, ಫೆಬ್ರುವರಿ 8 ರಂದು ಈ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿತ್ತು. ದಿನಾಂಕ ಫೆಬ್ರುವರಿ 11 ನಡೆದ ಮತ ಎಣಿಕೆ ಕಾರ್ಯದಲ್ಲಿ ಒಟ್ಟು 62 ಸ್ಥಾನಗಳಲ್ಲಿ ಆಮ್ ಆದ್ಮಿ ಪಕ್ಷಕ್ಕೆ ವಿಜಯಲಕ್ಸ್ಮಿ ಒಲಿದಿದ್ದು, ಬಿಜೆಪಿಗೆ 08 ಕ್ಷೇತ್ರಗಲ್ಲಿ ಗೆಲುವು ಸಿಕ್ಕಿದೆ. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯ ಜಯವು ಸಿಕ್ಕಿಲ್ಲ. ಮೂರನೇ ಭಾರಿಯೂ ಅರವಿಂದ ಕೇಜ್ರಿವಾಲ ಅವರು ಮುಖ್ಯಮಂತ್ರಿಯಾಗುತ್ತಿದ್ದಾರೆ. ಅರವಿಂದ ಕೇಜ್ರಿವಾಲ್ ಅವರು ಫೆಬ್ರುವರಿ 16 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಪ್ರದಾನಿ ಮೋದಿಯವರಿಗೆ ಆಹ್ವಾನವನ್ನು ನೀಡಿದ್ದಾರೆ. ಉಪ ರಾಜ್ಯಪಾಲ ಆದ ಅನಿಲ್ ಬೈಜಾಲ್ ಅವರು ಅರವಿಂದ ಕೇಜ್ರಿವಾಲ್ ಅವರಿಗೆ ಮುಖ್ಯಮಂತ್ರಿಯ ಪ್ರತಿಜ್ಞಾವಿಧಿ ಹೇಳಿಕೊಡಲಿದ್ದಾರೆ.