Job Description: ಮುಂಬೈ : ಜನವರಿ 26 ರಿಂದ ಎಲ್ಲಾ ಶಾಲೆಗಳಲ್ಲಿ ಸಂವಿಧಾನದ ಮುನ್ನುಡಿ ಓದುವುದು ಕಡ್ಡಾಯ ಮಾಡಿ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ ಮಹಾರಾಷ್ಟ್ರದ ಎಲ್ಲಾ ಶಾಲೆಗಳಲ್ಲಿ ಜನವರಿ 26 ರಿಂದ ಪ್ರತಿದಿನ ಬೆಳಗ್ಗೆ ಪ್ರಾರ್ಥನೆ ವೇಳೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಂವಿಧಾನದ ಮುನ್ನಡಿಯನ್ನು ಓದಿ ಹೇಳಬೇಕು ಎಂದು ಮಹಾರಾಷ್ಟ್ರ ಸರ್ಕಾರದ ಶಿಕ್ಷಣ ಸಚಿವಾಲಯ ಆದೇಶ ಹೊರಡಿಸಿದೆ. ಗಣರಾಜ್ಯೋತ್ಸವ ದಿನದಿಂದ ಅಂದರೆ ಭಾರತದ ಸಂವಿಧಾನ ಜಾರಿಗೆ ಬಂದ ದಿನವೇ ಮಹಾರಾಷ್ಟ್ರದ ಎಲ್ಲಾ ಶಾಲೆಗಳು ಪ್ರತಿದಿನ ಬೆಳಗ್ಗೆ ರಾಷ್ಟ್ರಗೀತೆಯೊಂದಿಗೆ ಸಂವಿಧಾನದ ಮುನ್ನುಡಿಯನ್ನು ಪಠಿಸಬೇಕಿದೆ.