Job Description: ನವದೆಹಲಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸಂಪೂರ್ಣ ಮಹಿಳಾ ಯೋಧರ ತಂಡ ಇದೇ 26 ಗಣರಾಜ್ಯ ದಿನದ ಪರೇಡ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಬೈಕ್ ಸಾಹಸ ಪ್ರದರ್ಶಿಸಲಿದೆ. 2014ರಲ್ಲಿ ಸಂಪೂರ್ಣ ಮಹಿಳೆಯರನ್ನು ಒಳಗೊಂಡ ತಂಡ ರಚಿಸಲು ಚಿಂತನೆ ನಡೆಸಿ, ಅದನ್ನು ಸಜ್ಜುಗೊಳಿಸಲಾಗಿದೆ ಎಂದು ಸಿಆರ್ಪಿಎಫ್ ವಕ್ತಾರ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಮೋಸೆಸ್ ದಿನಕರನ್ ತಿಳಿಸಿದ್ದಾರೆ.