Job Description: ಪ್ರಸಕ್ತಸಾಲಿನ ರಾಷ್ಟ್ರೀಯ ಶೌರ್ಯ ಪುರಸ್ಕಾರ ಪ್ರಕಟವಾಗಿದ್ದು, ಕರ್ನಾಟಕದ ಇಬ್ಬರು ಮಕ್ಕಳಿಗೆ ಪ್ರಶಸ್ತಿ ಘೋಷಣೆಯಾಗಿದೆ. ಪ್ರವಾಹ ಪರಿಸ್ಥಿತಿಯಲ್ಲಿ ಆಂಬುಲೆನ್ಸ್‌ಗೆ ದಾರಿ ಬಿಡಿಸಿ, ಐವರನ್ನು ರಕ್ಷಿಸಿದ್ದ ಬಾಲಕ ವೆಂಕಟೇಶ್ ಮತ್ತು ಕೋಪೋದ್ರಿಕ್ತ ಹಸುವಿನ ದಾಳಿಯಿಂದ ಮನೆಯ ಬಳಿ ನಿಂತಿದ್ದ ತಮ್ಮನನ್ನು ರಕ್ಷಿಸಿದ್ದ ಆರತಿ ಪುರಸ್ಕಾರಕ್ಕೆ ಆಯ್ಕೆಯಾದವರು. ಕರ್ನಾಟಕದ ಇಬ್ಬರೂ ಸೇರಿದಂತೆ ದೇಶದ ಒಟ್ಟು 22 ಮಕ್ಕಳಿಗೆ ಪ್ರಶಸ್ತಿ ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಪ್ರಶಸ್ತಿ ಪ್ರದಾನ ಮಾಡುವ ಸಾಧ್ಯತೆ ಇದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಮುಖ್ಯಸ್ಥೆ ಗೀತಾ ಸಿದ್ಧಾರ್ಥ ತಿಳಿಸಿದ್ದಾರೆ.