Job Description: ಕೇಂದ್ರ ಬಜೆಟ್ ಗೂ ಮುನ್ನ ಇದೊಂದು ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಸೋಮವಾರದಂದು ಸಹ ನಡೆಯಿತು. ಅದು 'ಹಲ್ವಾ ಕಾರ್ಯಕ್ರಮ'. ಯಾವುದೇ ಕೇಂದ್ರ ಬಜೆಟ್ ದಾಖಲೆಯ ಅಧಿಕೃತ ಮುದ್ರಣದ ಆರಂಭದಲ್ಲಿ ಈ ಕಾರ್ಯಕ್ರಮವನ್ನು ಮಾಡಲಾಗುತ್ತದೆ. 2020-21ನೇ ಸಾಲಿನ ಕೇಂದ್ರ ಬಜೆಟ್ ಪೂರ್ವಭಾವಿಯಾಗಿಯೂ ಇದು ಮಾಡಲಾಗಿದೆ. ಬಜೆಟ್ ಬಗ್ಗೆ ಗೋಪ್ಯತೆ ಕಾಪಾಡಿಕೊಳ್ಳಬೇಕು ಎಂಬ ಕಾರಣಕ್ಕೆ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಯಾರನ್ನೂ ಹೊರಗೆ ಬಿಡುವುದಿಲ್ಲ. ಬಜೆಟ್ ದಾಖಲೆ ಮುದ್ರಣವಾಗುವ ಪ್ರೆಸ್ ನಾರ್ತ್ ಬ್ಲಾಕ್ ನಲ್ಲೇ ಇದೆ. ಕೇಂದ್ರ ಬಜೆಟ್ ಮಂಡನೆ ಆಗುವ ತನಕ ಈ ಎಲ್ಲ ಅಧಿಕಾರಿಗಳಿಗೆ ಮುದ್ರಣಾಲಯವೇ ಮನೆಯಾಗಿರುತ್ತದೆ ಎಂದು ಆರ್ಥಿಕ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.