Job Description: ಬೆಂಗಳೂರು : ಇಂದಿನ ಡಿಜಿಟಲ್ ಯುಗದಲ್ಲಿ ಅನೇಕ ಸಾರ್ವಜನಿಕ ಸೇವೆಗಳು ಜನಸಾಮಾನ್ಯರ ಕೈಗಟುಕುತ್ತಿವೆ. ಸಿಲಿಕಾನ್ ಸಿಟಿ ಬೆಂಗಳೂರು ಪೊಲೀಸರೂ ಸಹ ತಮ್ಮ ಇಲಾಖೆ ಕಾರ್ಯಗಳನ್ನು ಡಿಜಿಟಲೀಕರಣ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಇದಕ್ಕೆ ಹೊಸದಾಗಿ 'ಸುಬಾಹು' ಅಂಡ್ರಾಯ್ಡ್ ಅಪ್ಲಿಕೇಶನ್ ಸೇರಿಕೊಂಡಿದೆ. ಪೊಲೀಸ್ ಇಲಾಖೆ ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕಲು ಹಾಗೂ ಸಾರ್ವಜನಿಕರು ನಿಶ್ಚಿಂತೆಯಿಂದ ಇರಲಿ ಎಂದು ಬೀಟ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ತಮ್ಮ ವ್ಯಾಪ್ತಿಯಲ್ಲಿ ಠಾಣೆಗಳ ಪೊಲೀಸ್ ಸಿಬ್ಬಂದಿ, ಪಾಳಿಯಲ್ಲಿ ಕೆಲಸ ಮಾಡಿ ಬೀಟ್‌ಗಳ ಅಂದಿನ ವಿದ್ಯಮಾನಗಳನ್ನು ದಾಖಲಿಸುವುದೇ ಬೀಟ್ ವ್ಯವಸ್ಥೆ. ಬೀಟ್ ವ್ಯವಸ್ಥೆಯಲ್ಲಿ ಆಯಾ ವ್ಯಾಪ್ತಿಯ ಬೀಟ್ ಪೊಲೀಸರು ತಾವು ಕೈಗೊಳ್ಳುವ ಬೀಟ್‌ನ ಮಾಹಿತಿಯನ್ನು ಪುಸ್ತಕದಲ್ಲಿ ದಾಖಲಿಸಬೇಕಿದೆ. ಇದು ಪಾರದರ್ಶಕತೆಯಿಂದ ಕೂಡಿಲ್ಲ ಎಂದು ಆಗಾಗ ಸಾಬೀತಾಗುತ್ತಾ ಬಂದಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸ್‌ರು 'ಇ-ಬೀಟ್' ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಇದಕ್ಕಾಗಿ ಆಗ್ನೇಯ ಡಿಸಿಪಿ ವಿಭಾಗ Subhahu Beat ಎಂಬ ಅಂಡ್ರಾಯ್ಡ್ ಅಪ್ಲಿಕೇಶನ್ ಪ್ರಾರಂಭಿಸಿದೆ.