Job Description: ದಾವೋಸ್, ಜ.20: ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್)ಯು ಸಿದ್ಧಪಡಿಸಿರುವ ವಿಶ್ವ ಸಾಮಾಜಿಕ ಗತಿಶೀಲತೆ ಸೂಚಿಯಲ್ಲಿ 82 ದೇಶಗಳ ಪೈಕಿ 76ನೇ ಸ್ಥಾನದಲ್ಲಿ ಭಾರತವಿದೆ. ಡೆನ್ಮಾರ್ಕ್ ಮೊದಲ ಸ್ಥಾನದಲ್ಲಿದೆ. ಡಬ್ಲ್ಯುಇಎಫ್‌ನ 50ನೇ ವಾರ್ಷಿಕ ಶೃಂಗಸಭೆಗೆ ಮುನ್ನ ಬಿಡುಗಡೆಗೊಳಿಸಿರುವ ಸೂಚಿಯು ಸಾಮಾಜಿಕ-ಆರ್ಥಿಕ ಹಿನ್ನೆಲೆಯನ್ನು ಪರಿಗಣಿಸದೆ ಪ್ರತಿ ವ್ಯಕ್ತಿಗೂ ಸಮಾನ ಅವಕಾಶವಿರುವ ಸಮಾಜಗಳನ್ನು ಸೃಷ್ಟಿಸಲು ಅಗತ್ಯವಾದ ಮಾನದಂಡಗಳನ್ನು ಬಯಸುವ ಐದು ರಾಷ್ಟ್ರಗಳಲ್ಲಿ ಭಾರತವನ್ನೂ ಸೇರಿಸಿದೆ.