Job Description: ವಾರ್ಷಿಕ ಇಂಧನ ಉಳಿತಾಯದ ಕಾರಣಕ್ಕಾಗಿ ಕೆಎಎಸ್ಸಾರ್ಟಿಸಿ ಪುತ್ತೂರು ವಿಭಾಗ ವ್ಯಾಪ್ತಿಯ ಸುಳ್ಯ ಘಟಕ ಪ್ರಥಮ ಸ್ಥಾನ ಗಳಿಸಿದೆ. ಪೆಟ್ರೋಲಿಯಂ ಕನ್ಸರ್ವೇಶನ್ ರಿಸರ್ಚ್ ಅಸೋಸಿಯೇಶನ್ (ಪಿಸಿಆರ್‌ಎ) ಈ ಪ್ರಶಸ್ತಿ ನೀಡುತ್ತಿದೆ. ಗ್ರಾಮಾಂತರ ರಸ್ತೆ ಹೊಂದಿರುವ ಸುಳ್ಯ ಘಟಕದ ಪ್ರತಿ ಬಸ್2018- 19ರಲ್ಲಿ 1 ಲೀ. ಡೀಸೆಲ್‌ಗೆ 4.69 ಕಿ.ಮೀ. ಓಡಾಟ ನಡೆಸಿದೆ. ಇದರ ಹಿಂದಿನ ವರ್ಷ 4.59 ಕಿ.ಮೀ. ನಷ್ಟಿತ್ತು. ಒಂದು ವರ್ಷದಲ್ಲಿ ಸಂಚಾರ ದೂರ 0.10 ಕಿ.ಮೀ.ಯಷ್ಟು ಹೆಚ್ಚಳವಾಗಿದೆ. ಅಂದರೆ ಒಂದು ವರ್ಷದಲ್ಲಿ 20 ಲಕ್ಷ ರೂ. ಮೌಲ್ಯದ ಇಂಧನ ಉಳಿಸಲಾಗಿದೆ.