Job Description: ಮೈಸೂರು, ಜನವರಿ 7: ಇಡ್ಲಿ-ಸಾಂಬಾರ್, ಉಪ್ಪಿಟ್ಟು, ತೆಂಗಿನಕಾಯಿ ಚಟ್ನಿ, ಎಗ್ ರೋಲ್ಸ್, ವೆಜ್ ರೋಲ್ಸ್, ವೆಜ್ ಪುಲಾವ್, ಹೆಸರುಬೇಳೆ ಹಲ್ವಾ... ಬಾಯಲ್ಲಿ ನೀರೂರಿಸುವ ಬಗೆಬಗೆಯ ಖಾದ್ಯಗಳ ಮೆನು ಸಿದ್ಧವಾಗಿದೆ. ಅಂದಹಾಗೆ ಈ ಮೆನು ನಮಗೆ, ನಿಮಗಲ್ಲ. ಶೀಘ್ರದಲ್ಲಿಯೇ ಆಕಾಶಕಾಯಗಳ ಮಧ್ಯೆ 'ಹಾರಾಟ' ನಡೆಸಲಿರುವ ನಮ್ಮ ಹೆಮ್ಮೆಯ ಗಗನಯಾನಿಗಳಿಗೆ. ತನ್ನ ಮೊದಲ ಗಗನಯಾನದ ರೋಮಾಂಚನಕಾರಿ ಗಳಿಗೆಗೆ ಇಸ್ರೋ ಸಿದ್ಧತೆ ನಡೆಸಿದೆ. ಭಾರತದ ಪ್ರಥಮ ಮಾನವ ಸಹಿತ ಗಗನಯಾನ ಇದೇ ವರ್ಷ ನಡೆಯಲಿದೆ. ಅದಕ್ಕಾಗಿ ಆಯ್ದ ನಾಲ್ವರು ಗಗನಯಾನಿಗಳು ರಷ್ಯಾದಲ್ಲಿ ತರಬೇತಿ ಪಡೆದುಕೊಳ್ಳಲಿದ್ದಾರೆ.