Job Description: ನವದೆಹಲಿ: ಅಮೆರಿಕಾದ ಜೀವಗಳನ್ನು ಉಳಿಸಲು ಯಾವುದೇ ಕ್ರಮಕ್ಕೂ ಡೋನಾಲ್ಡ್ ಟ್ರಂಪ್ ಆಡಳಿತ ಹಿಂಜರಿಯುವುದಿಲ್ಲ ನಮ್ಮ ಮಿತ್ರ ರಾಷ್ಟ್ರಗಳು, ಸ್ನೇಹಿತರ ಸುರಕ್ಷತೆ ಕಲ್ಪಿಸುವ ಭರವಸೆಯನ್ನು ಅಮೆರಿಕಾ, ಭಾರತಕ್ಕೆ ನೀಡಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್, ಭಾನುವಾರ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಜತೆ ನಡೆಸಿದ ದೂರವಾಣಿ ಮಾತುಕತೆಯ ವೇಳೆ ಈ ಭರವಸೆ ನೀಡಲಾಗಿದೆ. ಇರಾನ್ ಬೆದರಿಕೆ ಹಾಗೂ ಪ್ರಚೋದನೆ ಮುಂದುವರಿಸಿರುವ ಸಂಬಂಧ ತಾವೀಗ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ, ಅಮೆರಿಕಾ ಜನರನ್ನುಉಳಿಸಲು ಹಾಗೂ ನಮ್ಮ ಸ್ನೇಹಿತರು ಹಾಗೂ ಮೈತ್ರಿ ರಾಷ್ಟ್ರಗಳ ರಕ್ಷಣೆ, ಸುರಕ್ಷತೆಗೆ ಹಿಂಜರಿಯುವುದಿಲ್ಲ ಎಂದು ಪಾಂಪಿಯೋ ಟ್ವೀಟ್ ಮಾಡಿದ್ದಾರೆ.