Job Description: ದೆಹಲಿ:ಕರ್ನಾಟಕದ ರಾಜ್ಯಪಾಲರಾಗಿದ್ದ ತ್ರಿಲೋಕಿನಾಥ್ ಚತುರ್ವೇದಿ (90) ಜ.05 ರಂದು ಮಧ್ಯ ರಾತ್ರಿ ನಿಧನರಾಗಿದ್ದಾರೆ. ಏಕಾಏಕಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ನೋಯ್ಡಾದ ಸೆಕ್ಟರ್-27 ರಲ್ಲಿರುವ ಕೈಲಾಶ್ ಆಸ್ಪತ್ರೆಯಲ್ಲಿ ಚತುರ್ವೇದಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಜ.05 ರಂದು ಮಧ್ಯರಾತ್ರಿ ನಿಧನರಾಗಿದ್ದಾರೆ. ಐಎಎಸ್ ಅಧಿಕಾರಿಯಾಗಿದ್ದ ಟಿಎನ್ ಚತುರ್ವೇದಿ 2002-2007 ರ ಅವಧಿಯಲ್ಲಿ ಕರ್ನಾಟಕದ ರಾಜ್ಯಪಾಲರಾಗಿದ್ದರು. ಇದಕ್ಕೂ ಮುನ್ನ 1984-89 ರ ವರೆಗೆ ಸಿಎಜಿ ಆಗಿ ಕಾರ್ಯನಿರ್ವಹಿಸಿದ್ದರು. 1991 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.