Job Description: ಬೆಂಗಳೂರು: ರಾಷ್ಟ್ರಕವಿ ಕುವೆಂಪು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕನ್ನಡ ಸಂಘರ್ಷ ಸಮಿತಿ ನೀಡುವ ೨೦೧೯ನೇ ಸಾಲಿನ 'ಅನಿಕೇತನ ಪ್ರಶಸ್ತಿ'ಗೆ ಹಿರಿಯ ನ್ಯಾಯವಾದಿ ಹಾಗೂ ದಮನಿತರ ಧ್ವನಿಯಾಗಿರುವ ಸಿ.ಎಸ್. ದ್ವಾರಕಾನಾಥ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ ಐದು ಸಾವಿರ ರೂ ನಗದು, ಪ್ರಶಸ್ತಿ ಫಲಕ, ಅಭಿನಂದನಾ ಪತ್ರ ಒಳಗೊಂಡಿದೆ. ಕನ್ನಡಪರ ಚಿಂತಕ ನಂ.ನಂಜಪ್ಪ ಅವರು ಸಮಿತಿಯಲ್ಲಿ ಸ್ಥಾಪಿಸಿರುವ 'ನಂ.ನಂಜಪ್ಪ ಚಿರಂತನ ಪ್ರಶಸ್ತಿ' ಗೆ ಖ್ಯಾತ ಸಾಹಿತಿ ಮತ್ತು ವಿಚಾರವಾದಿಗಳ ಸಂಘದ ಅಧ್ಯಕ್ಷ ಎ.ಎಸ್. ನಟರಾಜ್ ಅವರ 'ಮೌಢ್ಯ ಮತ್ತು ವೈಚಾರಿಕತೆ' ಕೃತಿ ಆಯ್ಕೆಯಾಗಿದೆ. ಈ ಪ್ರಶಸ್ತಿ ಸಹ ಐದು ಸಾವಿರ ರೂ ನಗದು ಒಳಗೊಂಡಿದೆ.