Job Description: 👉ನವದೆಹಲಿ:ದೇಶದ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೇಮಕವಾಗಿದ್ದ ಜ.ಬಿಪಿನ್ ರಾವತ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ದೇಶದ ಪ್ರಥಮ ಸಿಡಿಎಸ್ ಆಗಿ ನೇಮಕವಾಗಿರುವ ಜನರಲ್ ರಾವತ್ (61ವರ್ಷ)ಗೆ ಅಮೆರಿಕದ ಸ್ಟೇಟ್ ಡಿಪಾರ್ಟ್ ಮೆಂಟ್ ಅಭಿನಂದನೆ ಸಲ್ಲಿಸಿದೆ. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಸಶಸ್ತ್ರ ಪಡೆಗಳಿಗೆ ಮುಖ್ಯಸ್ಥ(ಸಿಡಿಎಸ್)ರನ್ನು ನೇಮಕ ಮಾಡುವುದಾಗಿ ಘೋಷಿಸಿದ್ದರು. ಅಮೆರಿಕ ಸ್ಟೇಟ್ ಡಿಪಾರ್ಟ್ ಮೆಂಟ್ (ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರ್ಯವೈಖರಿ ರೀತಿ ವಿದೇಶಾಂಗ ನೀತಿಯ ಕಾರ್ಯನಿರ್ವಹಿಸುವ ಇಲಾಖೆ) ಪ್ರಕಟಣೆಯಲ್ಲಿ, ಇತ್ತೀಚೆಗೆ ನಡೆದ ಮಿಲಿಟರಿ ಹಾಗೂ ಆರ್ಥಿಕ ಸಂಬಂಧಿ ಚರ್ಚೆಯಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಮತ್ತಷ್ಟು ವೃದ್ದಿಗೊಂಡಿತ್ತು ಎಂದು ತಿಳಿಸಿದೆ. ಭಾರತದಲ್ಲಿರುವ ಅಮೆರಿಕದ ರಾಯಭಾರಿ ಕೆನ್ನೆಥ್ ಜುಸ್ಟರ್, ತಾನು ವೈಯಕ್ತಿಕವಾಗಿ ಜನರಲ್ ಬಿಪಿನ್ ರಾವತ್ ಗೆ ಅಭಿನಂದನೆ ತಿಳಿಸುವುದಾಗಿ ಟ್ವೀಟ್ ಮಾಡಿದ್ದಾರೆ. ಅಮೆರಿಕ-ಭಾರತದ ರಕ್ಷಣಾ ಪಾರ್ಟನರ್ ಶಿಪ್ ನಲ್ಲಿ ಇನ್ನಷ್ಟು ಪ್ರಗತಿ ಕಾಣಲಿದೆ ಎಂದು ತಿಳಿಸಿದ್ದಾರೆ.