Job Description: 👉 ಕಳೆದ 119 ವರ್ಷಗಳ ತನ್ನ ಇತಿಹಾಸದಲ್ಲೇ ಅತ್ಯಂತ ಶೀತಮಯ ಡಿಸೆಂಬರ್ ತಿಂಗಳಿಗೆ ದೆಹಲಿ ಈ ವರ್ಷ ಸಾಕ್ಷಿಯಾಗಿದೆ. ಕಳೆದ ಕೆಲ ದಿನಗಳಿಂದ ಗರಿಷ್ಠ ಉಷ್ಣಾಂಶ ದಾಖಲಾಗುವ ಮೂಲಕ ಈ ದಾಖಲೆ ನಿರ್ಮಾಣವಾಗಿದೆ. ಕಳೆದ ಎರಡು ವಾರಗಳಲ್ಲಿ ವಿಪರೀತ ಶೀತಗಾಳಿಯಿಂದ ರಾಷ್ಟ್ರ ರಾಜಧಾನಿ ತತ್ತರಿಸಿ ಹೋಗಿದೆ. 1901ರಿಂದಲೂ ಪ್ರತಿ ವರ್ಷದ ತಾಪಮಾನ ದಾಖಲೆಗಳನ್ನು ಭಾರತೀಯ ಹವಾಮಾನ ಇಲಾಖೆ ಕಾಪಾಡಿಕೊಂಡು ಬಂದಿದೆ. ದೆಹಲಿ ಮಾತ್ರವಲ್ಲದೇ ಉತ್ತರ ಭಾರತದ ಅನೇಕ ನಗರಗಳು ಚಳಿಯಿಂದ ತತ್ತರಿಸಿಹೋಗಿದ್ದು, ವಿಪರೀತ ಇಬ್ಬನಿ ವಾತಾವರಣದ ಕಾರಣ ವಿಮಾನ ಹಾಗೂ ರೈಲು ಸಂಚಾರದಲ್ಲಿ ಸಾಕಷ್ಟು ವ್ಯತ್ಯಯವಾಗಿದೆ.