Job Description: * ಭಾರತೀಯ ಮೂಲದ ಮನ್ಪ್ರೀತ್ ಮೋನಿಕಾ - ಸಿಂಗ್ ಅವರು ಹ್ಯಾರಿಸ್ ನ್ಯಾಯಾಲಯದ ನ್ಯಾಯಾಧೀಶೆಯಾಗಿ ಶುಕ್ರವಾರ ಜನವರಿ 06 ರಂದು ಪ್ರಮಾಣ ವಚನ ಸ್ವೀಕರಿ ಸಿದರು. ಅಮೆರಿಕ ದಲ್ಲಿ ಸಿಖ್ ಸಮು ದಾಯಕ್ಕೆ ಸೇರಿದ ಮೊದಲ ನ್ಯಾಯಾಧೀಶೆ ಎಂಬ ಖ್ಯಾತಿಗೆ ಮನ್‌ಪ್ರೀತ್‌ ಪಾತ್ರರಾಗಿದ್ದಾರೆ.* ಮನ್‌ಪ್ರೀತ್ ತಂದೆ, ಭಾರತದಿಂದ 1970 ಸುಮಾರಿಗೆ ಅಮೆರಿಕಕ್ಕೆ ವಲಸೆ ಹೋಗಿದ್ದರು. ಮನ್‌ಪ್ರೀತ್ ಅವರು ಹೂಸ್ಟನ್‌ನಲ್ಲಿಯೇ ಹುಟ್ಟಿ ಬೆಳೆದವರು. ಸದ್ಯ ಅವರು ಪತಿ, ಇಬ್ಬರು ಮಕ್ಕಳೊಂದಿಗೆ ಬಿಲೇರ್‌ನಲ್ಲಿ ವಾಸವಾಗಿದ್ದಾರೆ. ಸ್ಥಳೀಯ ಹಂತದ ವಕೀಲೆಯಾಗಿ ಮನ್‌ಪ್ರೀತ್ ಅವರು 20 ವರ್ಷ ಸೇವೆ ಸಲ್ಲಿಸಿದ್ದಾರೆ. ಜೊತೆಗೆ, ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರದ ನಾಗರಿಕ ಹಕ್ಕುಗಳ ಹಲವಾರು ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.