Job Description: * ಫೈರ್ ಅಂಡ್ ಪ್ಯೂರಿ ಸ್ಯಾಪರ್ಸ್ ನ ಕ್ಯಾಪ್ಟನ್ ಶಿವ ಚೌಹಾಣ್ ಅವರು ಜಗತ್ತಿನ ಅತಿ ಎತ್ತರದ ಸಿಯಾಚಿನ್ ಯುದ್ಧ ಭೂಮಿಯಲ್ಲಿ ಕಠಿಣ ತರಬೇತಿ ಪೂರ್ಣಗೊಳಿಸಿದ ನಂತರ ಕುಮಾರ್ ಪೋಸ್ಟ್ ನಲ್ಲಿ ಕಾರ್ಯಾಚರಣೆಗೆ ನಿಯೋಜಿಸಲ್ಪಟ್ಟ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ.* “ಇದು ಭಾರತದ ನಾರಿ ಶಕ್ತಿಯ ಚೈತನ್ಯವನ್ನು ಅನಾವರಣಗೊಳಿದ್ದು, ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುತ್ತದೆ” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ. * “ವಿವಿಧ ಸವಾಲುಗಳ ನಡುವೆಯೂ ಕ್ಯಾಪ್ಟನ್ ಶಿವ ಅವರು ಅಚಲ ಬದ್ಧತೆಯಿಂದ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಹೀಗಾಗಿ ಸಿಯಾಚಿನ್‌ನ ಮಂಜಿನಿಂದ ಆವೃತವಾದ ಸ್ಥಳದಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಳ್ಳಲು ಸಜ್ಜಾಗಿದ್ದಾರೆ” ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.* ರಾಜಸ್ಥಾನ ಮೂಲದ ಕ್ಯಾಪ್ಟನ್ ಶಿವ ಚೌಹಾಣ್ ಅವರು ಯುದ್ಧ ವಿಮಾನದ ಎಂಜಿನಿಯರ್‌, 2021ರ ಮೇ ತಿಂಗಳಲ್ಲಿ ಇಂಜಿನಿಯರ್ ರೆಜಿಮೆಂಟ್‌ಗೆ ನಿಯೋಜಿಸಲ್ಪಟ್ಟರು” ಎಂದು ಸೇನೆ ಹೇಳಿದೆ.