Job Description: * 1988ರ ಡಿಸೆಂಬರ್ 31ರಂದು ಸಹಿಹಾಕಲಾಗಿರುವ ದ್ವಿಪಕ್ಷೀಯ ಒಡಂಬಡಿಕೆಯ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ಪರಮಾಣು ಸ್ಥಾವರಗಳ ಪಟ್ಟಿಯನ್ನು ಜನೆವರಿ 01 ಭಾನುವಾರದಂದು ಪರಸ್ಪರ ವಿನಿಮಯ ಮಾಡಿಕೊಂಡಿದೆ. ನವದೆಹಲಿ ಮತ್ತು ಇಸ್ಲಾಮಾಬಾದ್ ನಲ್ಲಿ ಈ ವಿನಿಮಯ ನಡೆದಿದೆ ಎಂದು ಹೇಳಲಾಗಿದೆ.* 'ಎರಡೂ ದೇಶಗಳು ಪರಸ್ಪರರ ಪರಮಾಣು ಸ್ಥಾವರಗಳು ಮತ್ತು ಸೌಲಭ್ಯಗಳ ಮೇಲೆ ಆಕ್ರಮಣ ಮಾಡುವುದನ್ನು ಈ ಒಡಂಬಡಿಕೆ ನಿಷೇಧಿಸುತ್ತದೆ. 1991ರ ಜನವರಿ 27ರಂದು ಜಾರಿಗೆ ಬಂದ ಈ ಒಡಂಬಡಿಕೆಯಲ್ಲಿ ಅಡಕವಾಗಿರುವ ನಿಬಂಧನೆಗಳ ಅನುಸಾರ, ಉಭಯ ದೇಶಗಳ ಪರಮಾಣು ಸ್ಥಾವರಗಳ ಪಟ್ಟಿಯನ್ನು ವಿನಿಮಯಗೊಂಡಿದೆ.