Job Description: * ಫುಟ್ಬಾಲ್ ದಿಗ್ಗಜ ಪೇಲೆ ಅವರಿಗೆ ಭಾವಪೂರ್ಣ ವಿದಾಯ ಹೇಳಲು ಬ್ರೆಜಿಲ್ ನ ಸ್ಯಾಂಟೋಸ್ ನಗರದಲ್ಲಿ ಸಿದ್ಧತೆ ನಡೆದಿದ್ದು, ಸ್ಯಾಂಟೋಸ್ ಸ್ಮಾರಕ ಸ್ಮಶಾನದಲ್ಲಿ ಜನೆವರಿ 03 ರಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ.* ವಿಶ್ವಾದ್ಯಂತ ಅಭಿಮಾನಿಗಳ ಕಂಬನಿ ಫುಟ್ಬಾಲ್ ದಂತಕಥೆ ಪೀಲೆ ಕ್ಯಾನ್ಸರ್ನಿಂದ ನಿಧನರಾಗಿರುವ ಇವರು ಬ್ರೆಜಿಲ್ಗೆ ಮೂರು ಬಾರಿ ವಿಶ್ವಕಪ್ ಗೆಲ್ಲಿಸಿದ್ದ ಕಾಲ್ಚೆಂಡಿನ ದಿಗ್ಗಜ - ಮೂರು ಸಲ ವಿಶ್ವಕಪ್ ಗೆದ್ದ ಏಕೈಕ ಆಟಗಾರರಾಗಿದ್ದರು.* ಪೇಲೆಯವರು ತಮ್ಮ 15 ನೇ ವಯಸ್ಸಿನಲ್ಲಿ ಸ್ಯಾಂಟೋಸ್ ಕ್ಲಬ್ ಸೇರಿಕೊಂಡಿದ್ದರು. 1116 ಪಂದ್ಯಗಳನ್ನು ಆಡಿ 1091 ಗೋಲುಗಳನ್ನು ಗಳಿಸಿದ್ದರು. ತಂಡದ ಆಟಗಾರರಾಗಿ ಒಟ್ಟು 45 ಪ್ರಶಸ್ತಿಗಳನ್ನು ಜಯಿಸಿದ್ದರು.