Job Description: * ಗಡಿಯಲ್ಲಿ ಚೀನಾದ ತಂಟೆ ತಡೆಯಲು ಭಾರತವು ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಖಂಡಾಂತರ ಕ್ಷಿಪಣಿ ನಿಯೋಜಿಸಲು ಸಜ್ಜಾಗಿದೆ. ಪಾಕಿಸ್ತಾನ ಹಾಗೂ ಚೀನಾದ ಗಡಿ ಕಾವಲಿಗೆ 'ಪ್ರಳಯ' ಕ್ಷಿಪಣಿಗಳನ್ನು ನಿಯೋಜನೆ ಮಾಡಲು ರಕ್ಷಣಾ ಇಲಾಖೆ ತೀರ್ಮಾನಿಸಿದ್ದು, 120 ಖಂಡಾಂತರ ಕ್ಷಿಪಣಿ ಖರೀದಿ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದೆ. * ಗಡಿಯಲ್ಲಿ ತಂಟೆ ಮಾಡುವ ಚೀನಾ ಹಾಗೂ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲು ರಕ್ಷಣಾ ಇಲಾಖೆ ಹೊಸ ಹೆಜ್ಜೆ ಇರಿಸಿದ್ದು, ಯುದ್ಧತಂತ್ರದ ಭಾಗವಾಗಿ ಕ್ಷಿಪಣಿ ನಿಯೋಜಿಸಲು ಸರಕಾರ ನಿರ್ಧರಿಸಿದೆ. ಪ್ರಸ್ತುತ ಇರುವ ಶಸ್ತ್ರಸಜ್ಜಿತ ಕ್ಷಿಪಣಿಗಳ ಸ್ಥಾನದಲ್ಲಿ ಪ್ರಳಯ ಕಾರ್ಯ ನಿರ್ವಹಣೆ ಮಾಡಲಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. 150ರಿಂದ 500 ಕಿ.ಮೀ. ದೂರ ಕ್ರಮಿಸಬಲ್ಲ ಸಾಮರ್ಥ್ಯದ ಪ್ರಳಯ ಕ್ಷಿಪಣಿ, 350ರಿಂದ 700 ಕೆಜಿ ತೂಕ ಹೊತ್ತೊಯ್ಯಬಲ್ಲವು.