Job Description: * ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು 22 ಚಿನ್ನದ ಪದಕಗಳು ಸೇರಿದಂತೆ ಒಟ್ಟು 61 ಪದಕಗಳೊಂದಿಗೆ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿತು* ಇತಿಹಾಸದಲ್ಲಿ ಮೊದಲ ಬಾರಿಗೆ, ಭಾರತದ ಪುರುಷರ ತಂಡವು 14 ಬಾರಿಯ ವಿಶ್ವ ಚಾಂಪಿಯನ್ ಇಂಡೋನೇಷ್ಯಾವನ್ನು ಸೋಲಿಸುವ ಮೂಲಕ ಅಂತರರಾಷ್ಟ್ರೀಯ ಥಾಮಸ್ ಕಪ್ ಅನ್ನು ಗೆದ್ದುಕೊಂಡಿತು* 2022 ನೇ ಸಾಲಿನ ರಾಷ್ಟ್ರೀಯ ಕ್ರೀಡೆ ಮತ್ತು ಸಾಹಸ ಪ್ರಶಸ್ತಿಗಳನ್ನು 44 ಅತ್ಯುತ್ತಮ ಕ್ರೀಡಾಪಟುಗಳು/ತರಬೇತುದಾರರಿಗೆ ನೀಡಲಾಯಿತು* ಭಾರತವು 17 ವರ್ಷದೊಳಗಿನವರ ಫಿಫಾ ಮಹಿಳಾ ಫುಟ್‌ಬಾಲ್ ವಿಶ್ವಕಪ್, 44 ನೇ ಫಿಡೆ ಚೆಸ್ ಒಲಿಂಪಿಯಾಡ್ ಮತ್ತು ಡಬ್ಲ್ಯು ಎಡಿಎ ಅಥ್ಲೀಟ್ ಬಯೊಲಾಜಿಕಲ್‌ ಪಾಸ್‌ಪೋರ್ಟ್ ಸಿಂಪೋಸಿಯಂ-2022 ನಂತಹ ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸಿತು.* 36ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಗುಜರಾತ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.* ಕ್ರೀಡೆಗಳಲ್ಲಿ ಡೋಪಿಂಗ್ ವಿರೋಧಿ ಚಟುವಟಿಕೆಗಳನ್ನು ನಿಯಂತ್ರಿಸಲು ಶಾಸನಬದ್ಧ ಸಂಸ್ಥೆಯಾಗಿ ರಾಷ್ಟ್ರೀಯ ಡೋಪಿಂಗ್ ನಿಗ್ರಹ ಏಜೆನ್ಸಿಯನ್ನು ರಚಿಸಲು ಸಂಸತ್ತು ರಾಷ್ಟ್ರೀಯ ಡೋಪಿಂಗ್ ನಿಗ್ರಹ ಮಸೂದೆ 2022 ಅನ್ನು ಅಂಗೀಕರಿಸಿದೆ* ಖೇಲೋ ಇಂಡಿಯಾ ಯುವ ಕ್ರೀಡಾಕೂಟದ 4 ಮತ್ತು 5 ನೇ ಆವೃತ್ತಿ ಮತ್ತು ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದ 2 ನೇ ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.