Job Description: * ತಮಿಳುನಾಡು ಸರ್ಕಾರ ಕೊಡಮಾಡುವ "ಶ್ರೇಷ್ಠ ಅನುವಾದಕ ಪ್ರಶಸ್ತಿ" ಗೆ ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಪ್ರೊಫೆಸರ್. ತಮಿಳ್ ಸೆಲ್ವಿಯವರು ಆಯ್ಕೆಯಾಗಿದ್ದಾರೆ. * ತಮಿಳ್ ಸೆಲ್ವಿಯವರು ಕನ್ನಡ ಹಾಗೂ ತಮಿಳು ಸಾಹಿತ್ಯ ಲೋಕಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಸೆಲ್ವಿಯವರನ್ನು ಆಯ್ಕೆಮಾಡಲಾಗಿದೆ. ಈ ಪ್ರಶಸ್ತಿಯು 2 ಲಕ್ಷ ರೂ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. * ತಮಿಳಿನಿಂದ ಕನ್ನಡಕ್ಕೆ ಅನುವಾದಿಸಿದ ಕೃತಿಗಳು : 1) ಶ್ರೀಲಂಕಾದ ತಮಿಳು ಕವಿತೆಗಳು 2) ಡಾ. ಕಾರ್ಲೋಸ್ ರವರ ಇವರು ಕಥೆಯಾದವರು ಎಂಬ ಕೃತಿ 3) ಅಬ್ದುಲ್ ರಹಮಾನ್ ರವರ ಆಲಾಪನೆ ಕೃತಿ 4) ಕನಿಮೋಳಿ ಯವರ ಬಸಿರ ವಾಸನೆ ಹಾಗೂ ಇನ್ನು ಹಲವಾರು ಕೃತಿಗಳನ್ನು ತಮಿಳಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.* ಸೆಲ್ವಿಯವರು ಕನ್ನಡ ಕೃತಿಗಳನ್ನು ತಮಿಳಿಗೆ ಅನುವಾದಿಸಿದ್ದಾರೆ ಅವುಗಳು : 1) ವೀರಪ್ಪ ಮೊಯಿಲಿಯವರ ಶ್ರೀರಾಮಾಯಣ ಮಹಾನ್ವೇಷಣಂ 2) ಅಕ್ಕಮಹಾದೇವಿ ವಚನಗಳು 3) ಅತ್ತಿಮಬ್ಬೆ ಇನ್ನು ಮೊದಲಾದವುಗಳನ್ನು ಕನ್ನಡದಿಂದ ತಮಿಳಿಗೆ ಅನುವಾದಿಸಿದ್ದಾರೆ.* ಡಿಸೇಂಬರ್ 21 ರಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರವರು ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದಾರೆ.