Job Description: * ಭಾರತೀಯ ಮೂಲದ ಲಿಯೋ ವಾರಡ್ಕ‌ ಎರಡನೇ ಬಾರಿಗೆ ಐರ್ಲೆಂಡ್‌ ಪ್ರಧಾನಿಯಾಗಲಿದ್ದಾರೆ. ಪ್ರಸ್ತುತ ಫಿಯಾನಾ ಪೇ ಪಕ್ಷದ ಮೈಕೆಲ್ ಮಾರ್ಟಿನ್ ಪ್ರಧಾನಿಯಾಗಿದ್ದಾರೆ. ವಾರಡ್ಕ‌, ಅವರ ಫೈನ್ ಗೇಲ್ ಮತ್ತು ಹಾಲಿ ಪ್ರಧಾನಿ ಮೈಕೆಲ್ ಮಾರ್ಟಿನ್ ಅವರ ಫಿಯಾನಾ ಫೇಲ್ ಪಕ್ಷಗಳ ನಡುವಿನ ಅಧಿಕಾರ ಹಂಚಿಕೆಯು ಐರಿಶ್ ಇತಿಹಾಸದಲ್ಲಿ ಅಸಾಧಾರಣವಾಗಿದೆ. * ವಾರಡ್ಕ‌ 38ನೇ ವಯಸ್ಸಿನಲ್ಲೇ ಟಾವೊಸೆಟ್ ಪ್ರಧಾನಿ ಯಾಗಿ ನೇಮಕಗೊಂಡ ಹೆಗ್ಗಳಿಕೆ ಹೊಂದಿದ್ದಾರೆ. ವಾರಡ್ಕರ್ ರವರು ಐರಲೇಂಡ್ ನಲ್ಲಿ ಜನಿಸಿದ್ದು ಅಲ್ಲಿಯೇ, ಡಬ್ಲಿನ್‌ನ ಟ್ರಿನಿಟಿ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದ ವಾರಡ್ಕ‌ ಜನರಲ್ ಪ್ರಾಕ್ಟಿಸ್‌ನಲ್ಲಿ ತೊಡಗಿದ್ದರೂ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.