Job Description: * ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ ಭಾರತವು ಹಲವಾರು ತಲೆಮಾರುಗಳಿಂದ ಕರಗತವಾದ ವಿವಿಧ ಕಲೆಗಳು ಮತ್ತು ಕರಕುಶಲತೆಗಳಿಗೆ ನೆಲೆಯಾಗಿದೆ. ಭಾರತದ ಒಟ್ಟು ಜಿ.ಐ. ಟ್ಯಾಗ್ ಗಳ ಸಂಖ್ಯೆ 432 ಕ್ಕೆ ಏರಿದೆ. ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಕೇರಳ ಅತಿ ಹೆಚ್ಚು ಜಿ.ಐ.ಗಳನ್ನು ಹೊಂದಿರುವ ಅಗ್ರ ರಾಜ್ಯಗಳಾಗಿವೆ. * ಪ್ರಸ್ತುತ ಭೌಗೋಳಿಕ ಸೂಚಕ(ಗ್ಲೋಬಲ್ ಇಂಡೆಕ್ಸ್)ಗಳ ಸಂಗ್ರಹಕ್ಕೆ ಸೇರ್ಪಡೆಯಾಗುವಂತೆ ಅಸ್ಸಾಂನ ಗಮೋಸಾ, ತೆಲಂಗಾಣದ ಟಂಡೂರ್ ರೆಡ್ಗ್ರಾಮ್, ಲಡಾಖ್ ನ ರಕ್ತ್ಸೆ ಕಾರ್ಪೊ ಏಪ್ರಿಕಾಟ್, ಮಹಾರಾಷ್ಟ್ರದ ಅಲಿಬಾಗ್ ಬಿಳಿ ಈರುಳ್ಳಿ ಮುಂತಾದ ಭಾರತದ ವಿವಿಧ ರಾಜ್ಯಗಳಿಂದ ಒಂಭತ್ತು ಹೊಸ ವಸ್ತುಗಳಿಗೆ ಪ್ರತಿಷ್ಠಿತ ಜಿ.ಐ. ಟ್ಯಾಗ್ ಗಳನ್ನು ನೀಡಲಾಗಿದೆ.