Job Description: * ಜಿ20 ಅಥವಾ ಗ್ರೂಪ್ ಆಫ್ 20 (20 ರಾಷ್ಟ್ರಗಳ ಸಮೂಹ) ಒಳಗೊಂಡಿರುವಂತಹ ಅಂತಾರಾಷ್ಟ್ರೀಯ ಸಂಘಟನೆಯಾಗಿದೆ. ಈ ಸಂಘಟನೆಯು ಅಂತಾರಾಷ್ಟ್ರೀಯ ಹಣಕಾಸು ಸುಸ್ಥಿರತೆ, ವಾತಾವರಣ ಬದಲಾವಣೆ ಉಪಶಮನ ಹಾಗೂ ಸುಸ್ಥಿರ ಅಭಿವೃದ್ಧಿಯಂತಹ ಜಾಗತಿಕ ಆರ್ಥಿಕತೆಗೆ ಸಂಬಂಧಪಟ್ಟ ಪ್ರಮುಖ ವಿಷಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. * ಜಿ20 ಸದಸ್ಯ ರಾಷ್ಟ್ರಗಳು ವಿಶ್ವದ ಒಟ್ಟು ಜಿಡಿಪಿಯ ಪೈಕಿ ಶೇಕಡಾ 80 ರಷ್ಟು ಪಾಲನ್ನು ಹೊಂದಿದ್ದು, ಶೇಕಡಾ 75 ರಷ್ಟು ಅಂತರಾಷ್ಟ್ರಿಯ ವ್ಯಾಪಾರ ಹಾಗೂ ವಿಶ್ವದ ಒಟ್ಟು ಜನಸಂಖ್ಯೆಯ ಪೈಕಿ ಶೇಕಡಾ 60 ರಷ್ಟು ಪಾಲನ್ನು ಹೊಂದಿದೆ. * ಭಾರತವು ಡಿಸೇಂಬರ್ 1, 2022 ರಿಂದ ಒಂದು ವರ್ಷದ ಅವಧಿಯವರೆಗೆ ಜಿ20 ಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಜಾಗತಿಕ ಆರ್ಥಿಕ ಸಂಪತ್ತು ಹಾಗೂ ಸಮೃದ್ಧಿಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ 200 ಕ್ಕೂ ಹೆಚ್ಚಿನ ಸಂಖ್ಯೆಯ ಸಭೆಗಳನ್ನು ನಡೆಸಲಿದೆ. * ಡಿಸೇಂಬರ್ 13 ರಿಂದ 15 ರವರೆಗೆ ಹಣಕಾಸು ಹಾಗೂ ಕೇಂದ್ರ ಬ್ಯಾಂಕ್ ಪ್ರತಿನಿಧಿಗಳ ಸಭೆ ನಡೆಯಲಿದೆ.* ಡಿಸೇಂಬರ್ 16 ರಿಂದ 17 ರವರೆಗೆ ನಿಯಮಾವಳಿ ರೂಪಿಸುವ ಕಾರ್ಯಕಾರಿ ಗುಂಪಿನ ಸಭೆ ನಡೆಯಲಿದೆ. * ಭಾರತದಲ್ಲಿ ಒಟ್ಟು 200 ಕ್ಕೂ ಹೆಚ್ಚು ಜಿ20 ಸಭೆಗಳು ನಡೆಯಲಿವೆ ಅದರಲ್ಲಿ ಕರ್ನಾಟಕದಲ್ಲಿ 14 ಸಭೆಗಳು ನಡೆಯಲಿವೆ. * ದೆಹಲಿಯ ನಂತರ ಕರ್ನಾಟಕ ಅತಿ ಹೆಚ್ಚಿನ ಸಂಖ್ಯೆಯ ಜಿ20 ಸಭೆಗಳ ಆತಿಥ್ಯ ವಹಿಸಲಿದೆ. * ಕರ್ನಾಟಕದ 14 ಸಭೆಗಳ ಪೈಕಿ ಬೆಂಗಳೂರಿನಲ್ಲಿ 11, ಹಂಪಿಯಲ್ಲಿ 2 ಹಾಗೂ ಮೈಸೂರಿನಲ್ಲಿ 1 ಸಭೆ ನಡೆಯಲಿದೆ.