Job Description: * ಭಾರತದ ಮೊದಲ ವರ್ಟಿಕಲ್ ಸೀ ಲಿಫ್ಟ್ ರೈಲ್ವೆ ಸೇತುವೆಯು ರಾಮೇಶ್ವರಂ ನಲ್ಲಿ ಪಂಚಾನ್‌ನಲ್ಲಿ ಸಿದ್ದವಾಗುತ್ತಿದ್ದು, ಶೀಘ್ರದಲ್ಲೇ ಕಾರ್ಯ ರೂಪಕ್ಕೆ ಬರಲಿದೆ. ಈಗಾಗಲೇ ಇದರ ಕಾಮಗಾರಿ ಶೇಕಡಾ 84 ರಷ್ಟು ಪೂರ್ಣಗೊಂಡಿದ್ದು ಇದರ ವಿಶೇಷ ಏನೆಂದರೆ ಈ ಸೇತುವೆ ಸಮುದ್ರದ ಮೇಲೆ ರಚನೆಯಾಗಿದ್ದು, ಲಿಫ್ಟ್‌ನಂತೆ ಇದೆ ಎನ್ನಲಾಗಿದೆ. * ಇಲ್ಲಿ ವ್ಯಾಪಾರ ವ್ಯವಹಾರ ಮಾಡಲು ಬರುವ ಹಡಗುಗಳಿಗೆ ಅನುಕೂಲಕರವಾಗಲಿದೆ. ಹಳಿಯನ್ನು ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ. ಅಸೆಂಬ್ಲಿಂಗ್ ಪ್ಲಾಟ್‌ಫಾರ್ಮ್ ಕೂಡ ಮುಕ್ತಾಯದ ಹಂತದಲ್ಲಿದೆ. ಈ ವರ್ಟಿಕಲ್ ಲಿಫ್ಟ್ ಬ್ರಿಡ್ಜ್ ಚಲಿಸುವ ಸೇತುವೆಯಾಗಿದ್ದು, ರೈಲ್ವೆ ಮಾರ್ಗದ ಅಡ್ಡಲಾಗಿ ಹಡಗು ಬಂದಾಗ, ಸೇತುವೆಯೇ ಲಂಬವಾಗಿ ಮೇಲಕ್ಕೆ ಏರಲಿದೆ.