Job Description: * 1949 ರಲ್ಲಿ ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ರಾಷ್ಟ್ರವು ನವೆಂಬರ್ 26 ರಂದು ʻಸಂವಿಧಾನ ದಿನʼವನ್ನು ಆಚರಿಸಲಿದೆ. * ಈ ಐತಿಹಾಸಿಕ ದಿನಾಂಕದ ಮಹತ್ವಕ್ಕೆ ಸೂಕ್ತ ಮಾನ್ಯತೆ ನೀಡುವ ಪ್ರಧಾನಮಂತ್ರಿಯವರ ದೂರದೃಷ್ಟಿ ಆಧರಿಸಿ, 2015 ರಿಂದ ʻಸಂವಿಧಾನ ದಿನʼ ಆಚರಣೆ ಸಂಪ್ರದಾಯವನ್ನು ಪ್ರಾರಂಭಿಸಲಾಯಿತು. * ಈ ವರ್ಷದ ಸಂವಿಧಾನ ದಿನಾಚರಣೆ ಅಂಗವಾಗಿ 2021 ರ ನವೆಂಬರ್ 26 ರಂದು ಸಂಸತ್ತು ಮತ್ತು ವಿಜ್ಞಾನ ಭವನದಲ್ಲಿ ಕಾರ್ಯಕ್ರಮ ಅಆಯೋಜಿಸಲಾಗಿದೆ.* ಗೌರವಾನ್ವಿತ ರಾಷ್ಟ್ರಪತಿಗಳು ಸಂವಿಧಾನ ರಚನಾ ಸಭೆ ಚರ್ಚೆಗಳ ಡಿಜಿಟಲ್ ಆವೃತ್ತಿ, ಭಾರತದ ಸಂವಿಧಾನದ ಕ್ಯಾಲಿಗ್ರಾಫ್ ಪ್ರತಿಯ ಡಿಜಿಟಲ್ ಆವೃತ್ತಿ ಮತ್ತು ಇಲ್ಲಿಯವರೆಗೆ ಎಲ್ಲಾ ತಿದ್ದುಪಡಿಗಳನ್ನು ಒಳಗೊಂಡಿರುವ ಭಾರತದ ಸಂವಿಧಾನದ ನವೀಕರಿಸಿದ ಆವೃತ್ತಿಯನ್ನು ಸಹ ಬಿಡುಗಡೆ ಮಾಡಲಿದ್ದಾರೆ. ಅವರು 'ಸಾಂವಿಧಾನಿಕ ಪ್ರಜಾಪ್ರಭುತ್ವ ಕುರಿತ ಆನ್ಲೈನ್ ರಸಪ್ರಶ್ನೆ'ಯನ್ನು ಉದ್ಘಾಟಿಸಲಿದ್ದಾರೆ.* ನವದೆಹಲಿಯ ವಿಜ್ಞಾನ ಭವನದ ಪ್ಲೀನರಿ ಹಾಲ್ ನಲ್ಲಿ ಸಂಜೆ 5:30 ಕ್ಕೆ ಸುಪ್ರೀಂ ಕೋರ್ಟ್ ಆಯೋಜಿಸಿರುವ ಎರಡು ದಿನಗಳ ಸಂವಿಧಾನ ದಿನಾಚರಣೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. * ಸರ್ವೋಚ್ಛ ನ್ಯಾಯಾಲಯದ ಎಲ್ಲಾ ನ್ಯಾಯಮೂರ್ತಿಗಳು, ಎಲ್ಲಾ ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಮೂರ್ತಿಗಳು ಮತ್ತು ಹಿರಿಯ ನ್ಯಾಯಾಧೀಶರು, ಭಾರತದ ಸಾಲಿಸಿಟರ್ ಜನರಲ್ ಮತ್ತು ಕಾನೂನು ವೃಂದದ ಇತರ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು. ಪ್ರಧಾನಮಂತ್ರಿಯವರು ಗಣ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.